top of page

ಎಲ್ಲರಿಗೂ ನಮಸ್ಕಾರ...

ನಾನು ನಿಮ್ಮ ಪ್ರೀತಿಯ ಸಿರಿಗೆರೆ ಪಾಟೀಲ್‌ ದಿನೇಶ್‌, ಜನಮಾನಸದಲ್ಲಿ ಎಸ್.ಪಿ. ದಿನೇಶ್‌ ಆದ ನಾನು ವೃತ್ತಿಯಲ್ಲಿ ವಕೀಲರಾಗಿದ್ದು ಶಿವಮೊಗ್ಗ ಜಿಲ್ಲೆಯ ಆಯನೂರು (ಗ್ರಾಮ), ಸಿರಿಗೆರೆಯಲ್ಲಿ ಜನಿಸಿ, ಆಚಾರ್ಯ ತುಳಸಿ ನ್ಯಾಷನಲ್ ಕಾಲೇಜ್ ಆಫ್ ಕಾಮರ್ಸ್‌ನಿಂದ ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದು ಮತ್ತು ಶಿವಮೊಗ್ಗದ ನ್ಯಾಷನಲ್ ಕಾಲೇಜ್ ಆಫ್ ಲಾನಿಂದ ಎಲ್‌ಎಲ್‌ಬಿ ಪೂರ್ಣಗೊಳಿಸಿರುತ್ತೇನೆ.

ಪ್ರಸ್ತುತ ನನ್ನನ್ನು ಜನತೆ ಕ್ರಿಯಾಶೀಲ ರಾಜಕಾರಣಿ, ಸಮರ್ಪಿತ ಕಾಂಗ್ರೆಸ್ಸಿಗ, ಉದ್ಯಮಶೀಲ, ದೂರದೃಷ್ಟಿಗಳ ಸಮಷ್ಟಿ ಶಕ್ತಿಯನ್ನು ಮೈಗೂಡಿಸಿಕೊಂಡಿರುವ  ದೀನ, ದಲಿತ, ನಿರ್ಗತಿಕರಿಗೆ ಸುಲಭವಾಗಿ ತಲುಪಬಹುದಾದ ಸಹಾಯ ಹಸ್ತವನ್ನು ಚಾಚುವ ನಾಯಕನನ್ನಾಗಿ ಗುರುತಿಸುತ್ತಿದ್ದು ಈ ಶಕ್ತಿಯನ್ನು ನೀಡಿದ ಆ ಗುರು ಹಿರಿಯರಿಗೆ ಮತ್ತು ದೇವರಿಗೆ ವಂದಿಸುತ್ತೇನೆ.

ಹಾಗೂ ನಿಮ್ಮೆಲ್ಲರ ಆಶಿರ್ವಾದ ಮತ್ತು ಹಾರೈಕೆಗಳಿಂದ  ಶಿವಮೊಗ್ಗ ಪದವೀದರರ ಸಂಘದ ಸತತ 6ನೇ ಬಾರಿಯ ಅಧ್ಯಕ್ಷನಾಗಿ ಮತ್ತು ಜಿಲ್ಲಾ ರೆಡ್ ಕ್ರಾಸ್‍ ಸಂಸ್ಥೆ ಛೇರ್ಮನ್ ಆಗಿ, ಶಿವಮೊಗ್ಗ ಜಿಲ್ಲೆಯ ಪ್ರತಿಷ್ಟಿತ ವಿದ್ಯಾಸಂಸ್ಥೆಯಾದ ದೇಶೀಯ ವಿದ್ಯಾಶಾಲಾ ಸಮಿತಿಯ ಉಪಾಧ್ಯಕ್ಷನಾಗಿ, ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಗೌರವ ಕಾರ್ಯದರ್ಶಿಯಾಗಿ ಮತ್ತು ಡಿ.ಸಿ.ಸಿ. ಬ್ಯಾಂಕ್‍ನ ನಿರ್ದೇಶಕರಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಹೆಸರು ಮಾಡಲು ಅವಕಾಶವಾಗಿರುತ್ತದೆ.  

ವಿದ್ಯಾರ್ಥಿ ದೆಸೆಯಲ್ಲಿಯೇ ಅನೇಕ ಸಮಾಜ ಪರ ಹೋರಾಟಗಳಲ್ಲಿ ಪಾಲ್ಗೊಳ್ಳಲು ಅವಕಾಶವಾಗಿದ್ದು  ಶಿವಮೊಗ್ಗ ಜಿಲ್ಲಾ ಎನ್ ಎಸ್ ಯು ಐ(NSUI) ಸಂಚಾಲಕನಾಗಿ ಕಾರ್ಯನಿರ್ವಹಿಸಿದ್ದು ಪ್ರಸ್ತುತ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್‌ ನ ಉಪಾಧ್ಯಕ್ಷನಾಗಿದ್ದು ಕರ್ನಾಟಕ ರಾಜ್ಯ ಕಾಂಗ್ರೇಸ್‌ ಪಕ್ಷದ ಪ್ರಚಾರ ಸಮಿತಿಯ ಸಂಚಾಲಕನಾಗಿದ್ದು ಕಾಂಗ್ರೇಸ್‌ ಪಕ್ಷವು ನನಗೆ ಉತ್ತಮ ಬುನಾದಿಯನ್ನು, ಅವಕಾಶವನ್ನು ನೀಡಿರುತ್ತದೆ. 

2024- ಜೂನ್‌ ಮಾಹೆಯಲ್ಲಿ ಕರ್ನಾಟಕ ರಾಜ್ಯ ವಿಧಾನ ಪರಿಷತ್ತಿನ ನೈರುತ್ಯ ಪದವೀಧರರ ಕ್ಷೇತ್ರಕ್ಕೆ ಚುನಾವಣೆ ನಡೆದಿದ್ದು ಪರಾಭವಗೊಂಡಿರುತ್ತೇನೆ.   2012 ಮತ್ತು 2018ರ ಜೂನ್‌ ಮಾಹೆಯಲ್ಲಿ ನಡೆದಿದ್ದ ಇದೇ ಚುನಾವಣೆಯಲ್ಲಿ ನಾನು ಕಾಂಗ್ರೇಸ್‌ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೆ. ಸದರಿ ಚುನಾವಣೆಯಲ್ಲಿ ತಾವು ನನಗೆ ನೀಡಿದ ಅಭೂತಪೂರ್ವ ಬೆಂಬಲದಿಂದ ಭಾ.ಜ.ಪ. ಪಕ್ಷದ ಅಭ್ಯರ್ಥಿಯ ವಿರುದ್ದ ಕೆಲವು ಮತಗಳ ಅಂತರದಿಂದ ಪರಾಭವಗೊಂಡಿದ್ದೆ.  ಆದರೂ ತಮ್ಮೊಡನೆ ಸತತ ಸಂಪರ್ಕದಲ್ಲಿದ್ದು, ಸಾಂದರ್ಭಿಕವಾಗಿ ಕೆಲವರು ಕೋರಿದ ಸಹಾಯವನ್ನು ಬೇಡಿಕೆಗಳನ್ನು ಸಾಧ್ಯವಾದಷ್ಟು ಪರಿಹರಿಸುವಲ್ಲಿ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿರುತ್ತೇನೆ.

                        

ಇಂತಿ ನಿಮ್ಮ ಸೇವಾಕಾಂಕ್ಷಿ

sig-removebg-preview.png

QUICK ID

Phone

7353763555

Email

Website

Address

ಅವ್ವ, #69, ಜಯದೇವ ಲೇಔಟ್, 
ವಿನೋಬನಗರ,
ಶಿವಮೊಗ್ಗ-577204
7353763555

CONTACT ME

Thanks for submitting!

bottom of page