top of page

ವಿವಿಧ ಸಮಾಜ ಸಂಸ್ಥೆಗಳಲ್ಲಿ

ಪದವೀಧರರ ಸಹಕಾರಿ ಸಂಘ ನಿಯಮಿತ - ಸತತ 6ನೇ ಬಾರಿಯ ಅಧ್ಯಕ್ಷರು

gcs4.jpg

ಪ್ರಸ್ತುತ ಶಿವಮೊಗ್ಗ ಜಿಲ್ಲೆಯ ಪದವೀಧರರ ಸಹಕಾರಿ ಸಂಘದ ಸತತ 6ನೇ ಬಾರಿಯ ಅಧ್ಯಕ್ಷರಾಗಿ ಸಶಕ್ತವಾಗಿ ಕಾರ್ಯ ನಿರ್ವಹಿಸುತ್ತಿರುವ ಅನುಭವ. ಅದರಲ್ಲೂ ವಿಶೇಷವಾಗಿ ಸಂಸ್ಥೆಯನ್ನು ಹಣಕಾಸಿನ ವಿಚಾರದಲ್ಲಿ ಯಾವುದೇ ವಿವಾದಗಳಿಲ್ಲದೇ ಸತತ ಹತ್ತು ವರ್ಷಗಳಿಂದ ನಡೆಸಿಕೊಂಡು ಹೋಗುತ್ತಿರುವ ಕೀರ್ತಿ.

ಸದರಿ ಸಂಸ್ಥೆಯು 45 ವರ್ಷಗಳ ಹಿಂದೆ ಶಿವಮೊಗ್ಗ ನಗರದ ಪದವೀಧರ ಶಿಕ್ಷಕರು, ವರ್ತಕರು, ವಕೀಲರುಗಳೆಲ್ಲಾ ಸೇರಿ ಮೈಸೂರಿನ ದಿ ಗ್ರಾಜುಯೇಟ್ಸ್ ಕೋ ಆಪರೇಟಿವ್ ಬ್ಯಾಂಕಿನ ವ್ಯವಹಾರಗಳನ್ನು ಅಭ್ಯಸಿಸಿ, ಶಿವಮೊಗ್ಗ ನಗರದಲ್ಲೊಂದು ಅಂತಹ ಸಹಕಾರ ಸಂಘವನ್ನು ಆರಂಭಿಸಲು ಮುನ್ನುಡಿಯಿಟ್ಟು 1971 ರಲ್ಲಿ ಸಂಘವು ಸ್ಥಾಪನೆಯಾಯಿತು. ಸಂಘದ ನೋಂದಣಿಯ ನಂತರದ ಆರಂಭದ ವರ್ಷದಲ್ಲಿ ಕೇವಲ 163 ಸದಸ್ಯರನ್ನು ಹೊಂದಿ ರೂ. 8276-00 ರೂಪಾಯಿಗಳ ಷೇರು ಬಂಡವಾಳದೊಂದಿಗೆ ನ್ಯಾಯವಾದಿ ಆರ್.ಆರ್. ರುದ್ರಪ್ಪರವರ ಅಧ್ಯಕ್ಷತೆಯೊಂದಿಗೆ ಆರಂಭವಾಯಿತು. ರೂ 1001-00 ಠೇವಣಿ ಸಂಗ್ರಹಣೆ ಹಾಗೂ 5400-00 ಸಾಲ ನೀಡಿಕೆಯಿಂದ ಸಂಘ ಮೊದಲ ಒಂದು ವರ್ಷವನ್ನು ಪೂರೈಸಿತು. ಇವರ ಅಧಿಕಾರಾವಧಿಯಲ್ಲಿ ಈ ಅಂಕಿ ಅಂಶಗಳನ್ನು ಇಂದಿನ ಅಂದರೆ 2019 ರ ಮಾರ್ಚ್ ಮಾಹೆಯಲ್ಲಿರುವ ಪ್ರಗತಿಗೆ ಹೋಲಿಸಿದಾಗ ಸದಸ್ಯರ ಸಂಖ್ಯೆ 6295 ಆಗಿದೆ. ಈಗ ಷೇರು ಬಂಡವಾಳ ರೂ 2.36 ಕೋಟಿ, ಠೇವಣಿಗಳ ಸಂಗ್ರಹ  ರೂ. 37.16 ಕೋಟಿ, ನೀಡಿರುವ ಸಾಲ ರೂ. 30.24 ಕೋಟಿ, ಆಪದ್ಧನ ನಿಧಿ ರೂ 1.58 ಕೋಟಿ, ಇತರೇ ನಿಧಿಗಳು 3.92 ಕೋಟಿ, ಒಟ್ಟು ವಹಿವಾಟು 88.68 ಕೋಟಿ, ಒಟ್ಟು ಆದಾಯ 4.53 ಕೋಟಿ ನಿವ್ವಳ ಲಾಭ ರೂ. 1,22,59,946.00 ಗಳಿಸಿರುತ್ತದೆ. ಸಂಘದ ಸದಸ್ಯರ ಸುಸ್ತಿಸಾಲದ ಪ್ರಮಾಣವು (NPA) 0.42% ರಷ್ಟಿರುತ್ತದೆ. ಸದಸ್ಯರಿಗೆ ರಾಷ್ಟ್ರೀಕೃತ ಬ್ಯಾಂಕುಗಳಿಗಿಂತ ಕಡಿಮೆ ಬಡ್ಡಿ ದರಗಳಲ್ಲಿ ಸಾಲವನ್ನು ನೀಡಲಾಗುತ್ತಿದೆ. 2016ರ ಇವರ ಅಧಿಕಾರಾವದಿಯಲ್ಲಿ ಸಂಘವು "ಉತ್ತಮ ಸಹಕಾರ ಸಂಘ" ರಾಜ್ಯ ಪ್ರಶಸ್ತಿಗೆ ಭಾಜನವಾಗಿರುತ್ತದೆ. 

2017-2018 ರಲ್ಲಿ ಶಿವಮೊಗ್ಗ ಜಿಲ್ಲಾ ಸಹಕಾರಿ ಯೂನಿಯನ್‌ನಿಂದ ಈ ಸಂಘದ ಆಧ್ಯಕ್ಷರಾದ ಶ್ರೀ ಎಸ್.ಪಿ. ದಿನೇಶ್‌ ರವರಿಗೆ ಜಿಲ್ಲೆಯ "ಅತ್ಯುತ್ತಮ ಸಹಕಾರಿ" ಎಂದು ಜಿಲ್ಲಾ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.  2020-21 ರಲ್ಲಿ ಸಂಸ್ಥೆಯು ಶಿವಮೊಗ್ಗ ಜಿಲ್ಲೆಯ ಅತ್ಯುತ್ತಮ ಸಹಕಾರ ಸಂಘವೆಂದು ಶಿವಮೊಗ್ಗ ಡಿ.ಸಿ.ಸಿ. ಬ್ಯಾಂಕಿನಿಂದ ಗೌರವಿಸಲಾಗಿದೆ. 

2002-03 ರಲ್ಲಿ ಸಂಘದ ವ್ಯವಹಾರವನ್ನು ಪೂರ್ಣ ಲ್ಯಾನ್ ಮೂಲಕ ಗಣಕೀಕರಣ ಗೊಳಿಸಲಾಗಿದ್ದು ರಾಜ್ಯದಲ್ಲಿಯೇ ಕನ್ನಡದಲ್ಲಿ ಗಣಕೀಕೃತ ಗೊಳಿಸಿರುವ ಪ್ರಪ್ರಥಮ ಸಂಸ್ಥೆಯಾಗಿದ್ದು ಸಂಘದ ಅಧ್ಯಕ್ಷರಾದ ಎಸ್.ಪಿ. ದಿನೇಶ್‌ ರವರ ಮೇಲುಸ್ತುವಾರಿಯಲ್ಲಿ ಸಂಸ್ಥೆಯು ಮುನ್ನಡೆಯುತ್ತಿದೆ.  ಅಲ್ಲದೇ ಸಂಸ್ಥೆಯ ಅಡಿಟಿಂಗ್‌ "ಎ ಗ್ರೇಡ್‌" ಆಗಿದ್ದು ಇದು ಇವರ ಆಡಳಿತದ ಪಾರದರ್ಶಕತೆಗೆ ಮತ್ತು ದಕ್ಷತೆಗೆ ಉದಾಹರಣೆಯಾಗಿದೆ. 

ದೇಶೀಯ ವಿದ್ಯಾಶಾಲ ಸಮಿತಿ- ಉಪಾಧ್ಯಕ್ಷರು

9.jpg

ಶಿವಮೊಗ್ಗ ಜಿಲ್ಲೆಯಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ದೇಶೀಯ ವಿದ್ಯಾಶಾಲಾ ಸಮಿತಿಯ ಹೆಸರು ಮುನ್ನೆಲೆಯಲ್ಲಿ ನಿಲ್ಲುತ್ತದೆ.  ಈ ಸಂಸ್ಥೆಯು 2022 ರಲ್ಲಿ ಅಮೃತ ಮಹೋತ್ಸವವನ್ನು ಆಚರಿಸಿಕೊಂಡಿದ್ದು ಗುಣಾತ್ಮಕ ಶಿಕ್ಷಣವನ್ನು ಪ್ರಾಥಮಿಕ ಹಂತದಿಂದ ಪದವಿ ಹಂತದವರೆಗೆ ನೀಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. 

ಎಸ್.ಪಿ. ದಿನೇಶ್‌ ಮತ್ತು ತಂಡದವರು ಸಂಸ್ಥೆಯ ನಿರ್ದೇಶಕರಾಗಿ 2013 ರಲ್ಲಿ ಅಧಿಕಾರ ವಹಿಸಿ ಕೊಂಡಿದ್ದು ಸದರಿ ಸಂಸ್ಥೆಯು ಈ ಸಮಯದಲ್ಲಿ ಅವ್ಯವಸ್ಥೆ ಮತ್ತು ಭ್ರಷ್ಟಾಚಾರದ ಕಾರಣಗಳಿಂದ ಸೂಪರ್‌ಸೀಡ್‌ ಆಗಿರುತ್ತದೆ.  ಎಸ್.ಪಿ. ದಿನೇಶ್‌ ರವರು ದೂರದೃಷ್ಟಿ ಮತ್ತು ನಾಯಕತ್ವದ ಗುಣದಿಂದ ಶೀಘ್ರದಲ್ಲಿಯೇ ಡಿ.ವಿ.ಎಸ್.‌ ಸಂಸ್ಥೆಯ ಕಳಂಕವು ದೂರವಾಗಿದ್ದು ಸಂಸ್ಥೆಯ ಎಲ್ಲಾ ವಿಭಾಗಗಳು ಗುಣಾತ್ಮಕ ಶಿಕ್ಷಣದಲ್ಲಿ ಮುನ್ನೆಲೆಗೆ ಬರುವಲ್ಲಿ ಪ್ರಮುಖ ಪಾತ್ರವಹಿಸಿ ಇವರ ನಾಯಕತ್ವದಲ್ಲಿ ಡಿ.ವಿ.ಎಸ್.‌ ಕಲಾ ಮತ್ತು ವಿಜ್ಞಾನ ಕಾಲೇಜು ನ್ಯಾಕ್‌ (NAAC)ನಲ್ಲಿ "ಎ" ಗ್ರೇಡ್‌ ಮಾನ್ಯತೆಯನ್ನು ಪಡೆದು ಮುನ್ನುಗ್ಗುತ್ತಿರುವುದು ಇವರ ನೇರ, ನಿಷ್ಠುರ, ದಕ್ಷ, ದೂರದೃಷ್ಟಿಯ ನಾಯಕತ್ವಕ್ಕೆ ಸಾಕ್ಷಿಯಾಗಿದೆ.  ಸೂಪಸ್‌ಸೀಡ್‌ ಆದ ಸಂಸ್ಥೆಯ ವಿದ್ಯಾಸಂಸ್ಥೆಯನ್ನು ನ್ಯಾಕ್‌ ನ "ಎ" ಗ್ರೇಡ್‌ ಮಾನ್ಯತೆಯ ಮಟ್ಟಕ್ಕೆ ಏರಿಸಿದ್ದು ಸಾಮಾನ್ಯವಾದ ಮಾತಲ್ಲ. ಪ್ರಸ್ತುತ ದೇಶೀಯ ವಿದ್ಯಾಶಾಲಾ ಸಮಿತಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಹಾಗೆಯೇ ದೇಶೀಯ ವಿದ್ಯಾಶಾಲಾ ಸಮಿತಿಯ 75ನೇ ವರ್ಷದ ಸಲುವಾಗಿ ಮಾನ್ಯ ರಾಜ್ಯಪಾಲರು, ಮುಖ್ಯಮಂತ್ರಿಗಳನ್ನು, ಶಿಕ್ಷಣ ಮಂತ್ರಿಗಳನ್ನು, ಮಾನ್ಯ ಲೋಕಾಯುಕ್ತರನ್ನು ಹಾಗೂ ಮೈಸೂರಿನ ಮಹಾರಾಜರನ್ನು ಮತ್ತು ಜನಪ್ರೀಯ ಚಲನಚಿತ್ರ ನಟರಾದ ಶಿವರಾಜ್‌ ಕುಮಾರ್‌ ರನ್ನು ಡಿ.ವಿ.ಎಸ್.‌ ಸಂಸ್ಥೆಗೆ ಕರೆತಂದದ್ದು ಒಂದು ಇತಿಹಾಸವೇ ಆಗಿದೆ. 

slide14.jpg
lokayukta.jpg
with shivanna.jpg

ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘ- ಗೌರವ ಕಾರ್ಯದರ್ಶಿ

ಎಸ್.‌ ಪಿ. ದಿನೇಶ್‌ ರವರು ಶಿವಮೊಗ್ಗ ಜಿಲ್ಲೆಯ  ಪ್ರತಿಷ್ಠಿತ ವೀರಶೈವ ಲಿಂಗಾಯಿತ ಸಮಾಜದ ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಗೌರವ ಕಾರ್ಯದರ್ಶಿ 2022 ರಲ್ಲಿ ಆಯ್ಕೆಯಾಗಿರುತ್ತಾರೆ.  ಈ ಸಂಘವು ಶಿವಮೊಗ್ಗ ಜಿಲ್ಲೆಯಲ್ಲಿ ರಾಜಕೀಯ, ಆರ್ಥಿಕ, ಸಾಮಾಜಿಕವಾಗಿ ಪ್ರಾಮುಖ್ಯತೆಯನ್ನು ಪಡೆದಿರುವ ಪ್ರಮುಖ ಸಂಸ್ಥೆಯಾಗಿದ್ದು ಶ್ರೀ ಎಸ್.ಪಿ. ದಿನೇಶ್‌ ರವರು ಬಸವಸೇನೆ ಎಂಬ ತಂಡವನ್ನು ರಚಿಸಿಕೊಂಡು ಚುನಾವಣೆಯನ್ನು ಎದುರಿಸಿದ್ದು ಈ ತಂಡವು ಎರಡನೇ ಸ್ಥಾನವನ್ನು ಪಡೆದಿರುತ್ತದೆ.  ಮೊದಲನೇ ಸ್ಥಾನವನ್ನು ಪಡೆದ ಜ್ಯೋತಿಪ್ರಕಾಶ್‌ ರವರ ತಂಡ ಅಧ್ಯಕ್ಷ, ಉಪಾಧ್ಯಕ್ಷರಾಗಿ, ನಿರ್ದೇಶಕರಾಗಿ ಆಯ್ಕೆಯಾಗಿದ್ದು ಶ್ರೀ ಎಸ್.ಪಿ ದಿನೇಶ್‌ ರವರ ಕಾರ್ಯದಕ್ಷತೆಯನ್ನು ನೋಡಿ ವಿರೋಧಿ ಬಣದವರೆ ಆಂತರಿಕ ಚುನಾವಣೆಯಲ್ಲಿ ಅಡ್ಡ ಮತದಾನದ ಮೂಲಕ ಎಸ್.ಪಿ. ದಿನೇಶ್‌ರವರನ್ನು ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಆಯ್ಕೆ ಮಾಡಿದ್ದು ಶ್ರೀ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘದ ಇತಿಹಾಸದಲ್ಲಿಯೇ ಮೊದಲನೆಯದಾಗಿದೆ. 

basva sene.png
basd.jpg

ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌(DCC Bank)- ನಿರ್ದೇಶಕರು

ಸುಮಾರು 70 ವರ್ಷಗಳ ಇತಿಹಾಸವಿರುವ ಜಿಲ್ಲೆಯಾದ್ಯಂತ 28 ಬ್ರಾಂಚ್‌ಗಳನ್ನು ಹೊಂದಿರುವ ಶಿವಮೊಗ್ಗದ ಪ್ರತಿಷ್ಟಿತ ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ನ ನಿರ್ದೇಶಕರಾಗಿ ಪ್ರಸ್ತುತ ಕಾರ್ಯ ನಿರ್ವಹಣೆ.

Blood-Campdcc5.jpg

 ಜಿಲ್ಲಾ ರೆಡ್ ಕ್ರಾಸ್‍ ಸಂಸ್ಥೆ- ಛೇರ್ಮನ್ 

ಶಿವಮೊಗ್ಗ ಜಿಲ್ಲೆಯ ರೆಡ್‌ ಕ್ರಾಸ್‌ ಸಂಸ್ಥೆಯ ಛೇರ್ಮನ್‌ ಆಗಿದ್ದು ಇವರ ನಾಯಕತ್ವದಲ್ಲಿ ಅನೇಕ ರಕ್ತದಾನ ಶಿಬಿರಗಳು, ತರಭೇತಿಗಳು ಮತ್ತು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಕೋವಿಡ್‌ ಸಂಧರ್ಭದಲ್ಲಿ ಅನೇಕ ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡಿದ್ದು ಇವರ ಸಮಾಜಮುಖಿ ಕಾರ್ಯಕ್ಕೆ ಉದಾಹರಣೆಯಾಗಿದೆ.

indian red cross.jpg
covid time.jpg

ಕುವೆಂಪು ವಿಶ್ವವಿದ್ಯಾನಿಲಯದ ಸಿಂಡಿಕೇಟ್‌ನ ಮಾಜಿ ಸದಸ್ಯರು

ಸಂಸ್ಥಾಪಕ ಅಧ್ಯಕ್ಷರು- ಕುವೆಂಪು ವಿಶ್ವವಿದ್ಯಾನಿಲಯ ಕಾನೂನು ಪದವೀಧರರ ಸಂಘ

ನಿರ್ದೇಶಕರು- ಶಿವಮೊಗ್ಗ ಜಿಲ್ಲಾ ಗೃಹ ಮಂಡಳಿ ಸಹಕಾರ ಸಂಘ.

ಸಂಸ್ಥಾಪಕ  ಪ್ರಧಾನ ಕಾರ್ಯದರ್ಶಿಗಳು- ಶಿವಮೊಗ್ಗ ಜಿಲ್ಲಾ ವೀರಶೈವ ಯುವ ಬಳಗ.

ಶಿವಮೊಗ್ಗ ಭೂ ನ್ಯಾಯ ಮಂಡಳಿಯ- ಮಾಜಿ ಸದಸ್ಯರು

bottom of page