top of page

ನನ್ನ ಬಗ್ಗೆ

ಕರ್ನಾಟಕದ ರಾಜಕೀಯ, ಸಾಂಸ್ಕೃತಿಕ, ಸಾಮಾಜಿಕ, ಸಾಹಿತ್ಯಿಕ ಕ್ಷೇತ್ರಗಳನ್ನು ಒಮ್ಮೆ ನೋಡಿದಾಗ ಶಿವಮೊಗ್ಗ ಜಿಲ್ಲೆಯು ಅಗ್ರಮಾನ್ಯವಾಗಿ ನಿಲ್ಲುತ್ತದೆ.  ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿಗಳನ್ನು ತಂದ ಕುವೆಂಪು, ಅನಂತಮೂರ್ತಿರವರಿಂದ ಹಿಡಿದು ಕಡಿದಾಳ್‌ ಮಂಜಪ್ಪ ರಿಂದ ಎಸ್.‌ ಬಂಗಾರಪ್ಪನವರೆಗೆ ಕರ್ನಾಟಕದ ರಾಜಕೀಯ, ಸಾಂಸ್ಕೃತಿಕ ಶ್ರೀಮಂತಿಕೆಯನ್ನು ನೀಡಿದ ಶಿವಮೊಗ್ಗ ಜಿಲ್ಲೆ ತನ್ನದೇ ಆದ ಛಾಪನ್ನು ಹೊಂದಿದೆ.

ಇಂತಹ ಶಿವಮೊಗ್ಗ ಜಿಲ್ಲೆಯ ಆಯನೂರು ಗ್ರಾಮದ ಸಿರಿಗೆರೆಯಲ್ಲಿ ಎಸ್.ಪಿ. ದೇವೆಂದ್ರಪ್ಪ ಮತ್ತು ದೇವೀರಮ್ಮ ರವರ ಎರಡನೇ ಮಗನಾಗಿ ದಿನಾಂಕ: 10-07-1970 ರಂದು ಜನನ. 

WhatsApp Image 2023-09-12 at 5.53.36 PM.jpeg

ವಿದ್ಯಾರ್ಥಿ ದೆಸೆಯಲ್ಲಿಯೆ ಕಲೆ, ಸಂಸ್ಕೃತಿ, ರಾಜಕೀಯದಲ್ಲಿ ಆಸಕ್ತಿ ಮೂಡಿ ಶಾಲೆಯ ರಾಷ್ಟ್ರೀಯ ಹಬ್ಬಗಳನ್ನು ಆಚರಿಸುವುದರಲ್ಲಿ ಮುಂದಾಳು.

1993ರಲ್ಲಿ ಎನ್.ಎಸ್.ಎಸ್‌. ವತಿಯಿಂದ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಎನ್.ಎಸ್.ಎಸ್.‌ ಬಾವುಟವನ್ನು ಹಿಡಿದು ಭಾಗಿಯಾಗಿ ಆಗಿನ ರಾಷ್ಟ್ರಪತಿಯವರಾದ ಶಂಕರ್‌ ದಯಾಳ್‌ ಶರ್ಮರವರ ಭೇಟಿಯು ಜೀವನದ ಅಮೂಲ್ಯ ಕ್ಷಣಗಳಲ್ಲಿ ಒಂದು. 

 

1993 ರಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಕರ್ನಾಟಕವನ್ನು ಪ್ರತಿನಿದಿಸಿ ಆಗಿನ ರಾಷ್ಟ್ರಪತಿ ಕೆ.ಆರ್‌. ನಾರಾಯಣನ್‌ ರವರನ್ನು ಭೇಟಿ ಮಾಡಿದ್ದು. ಕಾಲೇಜು ದಿನಗಳಲ್ಲಿ ಶಿವಮೊಗ್ಗದ ಎ.ಟಿ.ಎನ್.ಸಿ. ಕಾಲೇಜಿನಲ್ಲಿ ಬಿ.ಕಾಂ ಪದವಿಯನ್ನು ಪಡೆಯುವಾಗ 1990 ರಿಂದ 1993ರ ವರೆಗೆ ಎ.ಟಿ.ಎನ್.ಸಿ ಕಾಲೇಜಿನ ಸಹಕಾರ ಸಂಘದಲ್ಲಿ ವಿಧ್ಯಾರ್ಥಿಗಳ ಪ್ರತಿನಿದಿ ನಿರ್ದೇಶಕರಾಗಿ ಸೇವೆ.  ಹಾಗೂ ರಾಷ್ಟ್ರೀಯ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆಯುವಾಗ 1995 ರಿಂದ 1996 ರವರೆಗೆ ವಿದ್ಯಾರ್ಥಿ ಸಂಘದ  ಕಾರ್ಯದರ್ಶಿಯಾಗಿ ಸೇವೆ.   1996 ರಿಂದ 1997 ರವರೆಗೆ ಕುವೆಂಪು ವಿಶ್ವವಿದ್ಯಾನಿಲಯದ ಸೆನೆಟ್‌ ಸದಸ್ಯರಾಗಿ ಸೇವೆ.

with president.png

ಹಾಗೆಯೇ 1993 ರಲ್ಲಿ ಶಿವಮೊಗ್ಗ ಜಿಲ್ಲೆಯ ಎನ್‌.ಎಸ್.ಯು.ಐ (NSUI) ನ ಜಿಲ್ಲಾ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದು ಅದೇ ವರ್ಷದಲ್ಲಿ ಶಿವಮೊಗ್ಗ ಜಿಲ್ಲೆ ಎನ್.ಎಸ್.ಯು.ಐ(NSUI)ನ ವಕ್ತಾರನಾಗಿ ಆಯ್ಕೆಯಾಗಿ ಕುವೆಂಪು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ಎನ್.ಎಸ್.ಯು.ಐ ನ ಅಡಿಯಲ್ಲಿ ಬಗೆಹರಿಸಿದ ಕೀರ್ತಿ.

ನಾಯಕತ್ವ ಗುಣದ ಕಾರಣ 1995 ರಿಂದ 2003 ರವರೆಗಿನ ಸುದೀರ್ಘ ಅವದಿಗೆ ಶಿವಮೊಗ್ಗ ಎನ್.ಎಸ್.ಯು.ಐ (NSUI) ನ ಜಿಲ್ಲಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಬಗೆಹರಿಸಿದ ಕೀರ್ತಿ.

1993 ರಿಂದ 2004ರವರೆಗೆ ಜಿಲ್ಲಾ ಯುವ ಕಾಂಗ್ರೇಸ್‌ನ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ಮತ್ತು 2004 ರಲ್ಲಿ ರಾಜ್ಯ ಕಾಂಗ್ರೇಸ್‌ ಪಕ್ಷವು ಕಾರ್ಯ ಮತ್ತು ನಾಯಕತ್ವ ಗುಣವನ್ನು ಗುರುತಿಸಿ ಕರ್ನಾಟಕ ರಾಜ್ಯ ಯುವ ಕಾಂಗ್ರೇಸ್‌ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿ 2007ರ ವರೆಗೆ ಕಾರ್ಯ ನಿರ್ವಹಿಸಿದ ಅನುಭವ. 

2007 ರಿಂದ 2010ರ ವರೆಗೆ ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್‌ನ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ಹಾಗೂ 2010ರಿಂದ 2017ರವರೆಗೆ ಜಿಲ್ಲಾ ಕಾಂಗ್ರೇಸ್‌ನ ಖಜಾಂಚಿ ಮತ್ತು ವಕ್ತಾರರಾಗಿ ಯಾವುದೇ ವಿವಾದಗಳಿಲ್ಲದ ಪರಿಣಾಮಕಾರಿ ಸೇವೆ ಸಲ್ಲಿಸಿ, ಪುಸ್ತುತ ಶಿವಮೊಗ್ಗ ಜಿಲ್ಲಾ ಕಾಂಗ್ರೇಸ್‌ನ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿರುವ ಅನುಭವ. 

ಶಿವಮೊಗ್ಗ ಜಿಲ್ಲೆಯ ಪ್ರಮುಖ ಸಂಸ್ಥೆಗಳಲ್ಲಿ ಹೊಂದಿರುವ ಹುದ್ದೆಗಳು

bottom of page